ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು (ಕೆಂಗೇರಿ ಲೋಕಸಭಾ ಕ್ಷೇತ್ರ) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮ ಲೋಕಸಭೆ (ಪಾರ್ಲಿಮೆಂಟರಿ) ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ತೇಜಸ್ವಿ ಸೂರ್ಯ ಅವರು ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ೩,೩೧,೧೯೨ ಮತಗಳ ಅಂತರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಿ.ಕೆ. ಹರಿಪ್ರಸಾದ್ ವಿರುದ್ಧ ಗೆದ್ದಿದ್ದಾರೆ. == ವಿಧಾನಸಭೆ ಕ್ಷೇತ್ರಗಳು == ಪ್ರಸ್ತುತ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಈ ಕೆಳಗಿನ ೮ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ: == ಸಂಸತ್ತಿನ ಸದಸ್ಯರು == === ಮೈಸೂರು ರಾಜ್ಯ === ಬೆಂಗಳೂರು ದಕ್ಷಿಣ: ೧೯೫೨: ಟಿ.ಮಾದಯ್ಯ ಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಗಳೂರು: ೧೯೫೭: ಎಚ್.ಸಿ.ದಾಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಗಳೂರು: ೧೯೬೨: ಎಚ್.ಸಿ.ದಾಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಂಗಳೂರು: ೧೯೬೭: ಕೆಂಗಲ್ ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೭೧: ಕೆಂಗಲ್ ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ === ಬೆಂಗಳೂರು ದಕ್ಷಿಣ ಕ್ಷೇತ್ರ === === ಚುನಾವಣಾ ಇತಿಹಾಸ === ೧೯೭೭ರಲ್ಲಿ ಕ್ಞೇತ್ರ ವಿಂಗಡನೆಯ ನಂತರ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೂ ನಡೆದ ೧೨ ಚುನಾವಣೆಗಳಲ್ಲಿ ೩ ಬಾರಿ ಜನತಾ ಪಕ್ಷ, ಒಮ್ಮೆ ಕಾಂಗ್ರೆಸ್ ಮತ್ತು ೮ ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್, ೬ ಬಾರಿ ಸತತವಾಗಿ ಇಲ್ಲಿಂದ ಸಂಸದರಾಗಿ ಚುನಾಯಿತರಾಗಿದ್ದರು. ೧೯೭೭ರ ಚುನಾವಣೆಯಲ್ಲಿ, ಕೆ.ಎಸ್ ಹೆಗ್ಡೆಯವರು (ನಿಟ್ಟೆ ಸಂತೋಷ್‌ ಹೆಗ್ಡೆಯವರ ತಂದೆ) ಜನತಾ ಪಕ್ಷದ ಉಮೇದುವಾರರಾಗಿ ಮೈಸೂರಿನ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸೌಧದ ನಿರ್ಮಾತೃವಾದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಗೆದ್ದರು. ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ರಾಜೀನಾಮೆ ನೀಡಿದ್ದರು. ೭೦ರ ದಶಕದ ಮಧ್ಯಭಾಗದಲ್ಲಿ ತತ್ಕಾಲೀನ ಕೇಂದ್ರ ಸರ್ಕಾರ, ಅವರು ಮತ್ತು ಇನ್ನು ಇಬ್ಬರು ಹಿರಿಯ ನ್ಯಾಯಾಧೀಸರನ್ನು ಕಡೆಗಣಿಸಿ ಇವರೆಲ್ಲರಿಗಿಂತ ಕಿರಿಯರನ್ನು ಮುಖ್ಯನಾಯಾಧೀಶರನ್ನಾಗಿ ನೇಮಿಸಿದಾಗ, ಸ್ವಾಭಿಮಾನಿ ಹೆಗ್ಡೆಯವರು ರಾಜೀನಾಮೆ ನೀಡಿದ್ದರು. ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹಾಸನ ಹೊರತುಪಡಿಸಿ ಜನತಾ ಪಕ್ಷ ಗೆದ್ದಂತಹ ಒಂದೇ ಒಂದು ಕ್ಷೇತ್ರ ಇದು. ನಂತರ ಅವರು ಲೋಕಸಭೆಯ ಮೊದಲ ಕಾಂಗ್ರೆಸೇತರ ಸಭಾಪತಿ (ಸ್ಪೀಕರ್)ರಾಗಿ ತಮ್ಮ ಶಿಸ್ತುಬದ್ಧ, ನ್ಯಾಯಯುತ ನಡುವಳಿಕೆಯಿಂದಾಗಿ ಖ್ಯಾತರಾದರು. ೧೯೮೦ರ ಚುನಾವಣೆಯಲ್ಲಿ ಟಿ.ಆರ್ ಶಾಮಣ್ಣ ಜನತಾ ಪಕ್ಷದಿಂದ ಗೆದ್ದರು. ಈ ಚುನಾವಣೆಯಲ್ಲಿ ಕಾಂಗ್ರಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು. ೧೯೮೪ರ ಚುನಾವಣೆ ತತ್ಕಾಲೀನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಕಾರಣ ನಡೆದ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ರಾಜೀವ ಗಾಂಧಿಯವರು ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಈ ಕ್ಷೇತ್ರದಲ್ಲಿ ವಿ.ಎಸ್.ಕೃಷ್ಣ ಅಯ್ಯರ್, ಜನತಾ ಪಕ್ಷದಿಂದ ಗೆದ್ದರು. ೧೯೮೯ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರಸ್ ಸೋತರೂ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಗುಂಡು ರಾಯರು ಗೆದ್ದರು. ಇದೊಂದೇ ಸಲ ಕಾಂಗ್ರಸ್ ಈ ಕ್ಷೇತ್ರದಲ್ಲಿ ಗೆದ್ದಿರುವುದು. ೧೯೯೧ರ ಚುನಾವಣೆಯಲ್ಲಿ ಗುಂಡು ರಾಯರನ್ನು ಖ್ಯಾತ ಅರ್ಥಶಾಸ್ತ್ರಜ್ಞ ಕೆ. ವೆಂಕಟಗಿರಿ ಗೌಡರು ಸೋಲಿಸಿ ಭಾರತೀಯ ಜನತಾ ಪಕ್ಷಕ್ಕೆ ಮೊದಲ ಬಾರಿ ಜಯ ಗಳಿಸಿಕೊಟ್ಟರು. ೧೯೯೬ ರಿಂದ ೨೦೧೪ರವರೆಗೆ, ಭಾರತೀಯ ಜನತಾ ಪಕ್ಷದಲ್ಲಿ ತಳಮಟ್ಟದಿಂದ ಬೆಳೆದು ಬಂದ ಅನಂತ್ ಕುಮಾರ್, ಸತತ ೬ ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದರು. ಇಲ್ಲಿಯವರೆಗೆ ಈ ಕ್ಷೇತ್ರವನ್ನು ಗೆದ್ದವರು ಆನುಭವಿಗಳಾಗಿದ್ದು. ಹಿರಿಯ ರಾಜಕಾರಣಿಗಳು, ಖ್ಯಾತ ನ್ಯಾಯಾಧೀಶರು, ಅರ್ಥಶಾಸ್ತ್ರಜ್ಞರು ಆಗಿದ್ದರು. ಈ ನಡುವೆ ವಾಜಪೇಯಿ ಸರ್ಕಾರಗಳಲ್ಲಿ ಮತ್ತು ಮೋದಿ ಸರ್ಕಾರದಲ್ಲಿಯೂ ಮಂತ್ರಿಆದರು. ವಿಶೇಷವೆಂದರೆ ಅವರ ವಿರುದ್ದ ಆರು ಬಾರಿ ಬೇರೆ ಬೇರೆ ಕಾಂಗ್ರೆಸ್ ಉಮೇದುವಾರರು ನಿಂತು ಸೋತರು. ೨೦೧೯ರ ಚುನಾವಣೆಯಲ್ಲಿ ೩.೩೦ ಲಕ್ಷದ ಭಾರಿ ಬಹುಮತದಿಂದ, ೨೮ ವರ್ಷದ ತೇಜಸ್ವಿ ಸೂರ್ಯ ಮೊದಲ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ಬಂದರು == ಚುನಾವಣಾ ಫಲಿತಾಂಶಗಳು == === ಸಾಮಾನ್ಯ ಚುನಾವಣೆ 1998 === === ಸಾಮಾನ್ಯ ಚುನಾವಣೆ 1999 === === ಸಾಮಾನ್ಯ ಚುನಾವಣೆ 2004 === === ಸಾಮಾನ್ಯ ಚುನಾವಣೆ 2009 === === ಸಾಮಾನ್ಯ ಚುನಾವಣೆ 2014 === === ಸಾಮಾನ್ಯ ಚುನಾವಣೆ 2019 === == ಉಲ್ಲೇಖಗಳು == == ಸಹ ನೋಡಿ == ಬೆಂಗಳೂರು ಲೋಕಸಭೆಯ ಕ್ಷೇತ್ರಗಳ ಪಟ್ಟಿ == ಬಾಹ್ಯ ಕೊಂಡಿಗಳು == ಬೆಂಗಳೂರು ದಕ್ಷಿಣ ಲೋಕ್ ಸಭ ಕ್ಷೇತ್ರದ ಚುನಾವಣೆ 2019 ದಿನಾಂಕ ಮತ್ತು ವೇಳಾಪಟ್ಟಿ 2019-04-10 ವೇಬ್ಯಾಕ್ ಮೆಷಿನ್ ನಲ್ಲಿ.